Brahmanaru (ಬ್ರಾಹ್ಮಣರು)
เกี่ยวกับ Brahmanaru (ಬ್ರಾಹ್ಮಣರು)
Adranyd of the Brahmin community
ಪ್ರಿಯ ವಿಪ್ರಬಂಧುಗಳೆ,
ವೇದಗಳ ಕಾಲದಿಂದಲೂ ಸಹಸ್ರಾರು ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯಿರುವ ಬ್ರಾಹ್ಮಣ ಸಮುದಾಯವು ಅನೇಕ ಏಳುಬೀಳುಗಳ ನಡುವೆ ತನ್ನದೆ ಆದ ಛಾಪನ್ನು ಉಳಿಸಿಕೊಂಡು ಬಂದಿದೆ. ಬ್ರಹ್ಮನ್ ಎಂದರೆ ಶ್ರೇಷ್ಠ ಆತ್ಮ ಎಂಬ ಅರ್ಥದಿಂದ ಬಾಹ್ಮಿನ್ ನಂತರ ಬ್ರಾಹ್ಮಣ ಆಗಿದೆ. ಬ್ರಾಹ್ಮಣರು ನಾಲ್ಕು ವೇದಗಳನ್ನು ಆಚರಿಸುವುದಷ್ಟೆ ಅಲ್ಲದೆ ಅನೇಕ ರಾಜ ಮನೆತನಗಳಿಗೆ ಮಾರ್ಗದರ್ಶಕರಾಗಿ, ಬ್ರಹ್ಮತೇಜಸ್ಸಿನ ಜತೆಗೆ ಕ್ಷಾತ್ರ ತೇಜಸ್ಸನ್ನು ಪ್ರಕಾಶಿಸಿದ್ದಾರೆ. ಬ್ರಾಹ್ಮಣರೆಂದರೆ ಅರ್ಚಕರೆಂಬುದು ಮಾತ್ರವಲ್ಲ ವೈದ್ಯರು, ಯೋಧರು,ಬರಹಗಾರರು, ಕವಿಗಳು, ಭೂ ಒಡೆಯರು, ಮಂತ್ರಿಗಳು, ಇತ್ಯಾದಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ಭಾರತದ ಕೆಲವು ಭಾಗಗಳಲ್ಲಿ ಬ್ರಾಹ್ಮಣ ರಾಜರು ಆಳ್ವಿಕೆ ಮಾಡಿದ್ದು ಉಂಟು.
ಬ್ರಾಹ್ಮಣರಲ್ಲಿ ಚಾಣುಕ್ಯ, ವಿದ್ಯಾರಣ್ಯ ಮುಂತಾದವರ ನಾಯಕತ್ವ ಚಿರಸ್ಮರಣೀಯವಾಗಿದೆ. ವೇದಾಂತ ದರ್ಶನ ಮತ್ತು ಉತ್ತರ ಮೀಮಾಂಸಾ ದರ್ಶನ ಪ್ರವರ್ತಕರಾದ ಆಚಾರ್ಯತ್ರಯರಾದ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಭಗವದ್ಗೀತೆ ಮತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದು ಧರ್ಮದ ಹಾಗೂವೇದೋಪನಿಷತ್ತುಗಳ ರಕ್ಷಣೆಯ ಮತ್ತು ಘೋಷಣೆ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಅವರ ಯುಕ್ತಿಯಂತೆ ಇಂದಿಗೂ ಶಿಷ್ಯ ಪರಂಪರೆಯ ಮಠ ಮಾನ್ಯಗಳ ಮೂಲಕ ದೀಪದಸಾಲುಗಳನ್ನು ಬೆಳಗುತ್ತಿದ್ದಾರೆ.
ಬ್ರಾಹ್ಮಣರು ವೇದೋಪನಿಷತ್ತುಗಳು ಅಷ್ಟೇ ಅಲ್ಲದೆ ಲೌಕಿಕ ವಿದ್ಯೆಯ ಅಂಗಗಳಾದ ಸಾಹಿತ್ಯ, ಸಂಗೀತ, ವಿಜ್ಞಾನ, ಸಿನಿಮಾರಂಗ, ಕ್ರೀಡೆ ಪ್ರಮುಖವಾಗಿ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಗಣನೀಯವಾದ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಮೊಳಗಿಸಿ, ದೇಶಭಕ್ತಿಯನ್ನು ಮೂಡಿಸಿದ ರಾಷ್ಟ್ರನಾಯಕರಲ್ಲಿ ಬ್ರಾಹ್ಮಣರೇ ಮೊದಲಿಗರು. ಆದರ್ಶಪ್ರಾಯವಾದ, ಶಾಶ್ವತವಾದ ಸೇವೆಯನ್ನು ಸಲ್ಲಿಸಿರುವ ಅನೇಕ ವಿಪ್ರ ಶ್ರೇಷ್ಠರನ್ನು ನಾವು ಸ್ಮರಿಸಿಕೊಳ್ಳಬಹುದು.
ವೇದಕಾಲದಲ್ಲಿ ಪ್ರಭಾವಶಾಲಿಗಳಾದ್ದ ಬ್ರಾಹ್ಮಣರು ಕೆಳ ಜಾತಿಗಳ ಬಗ್ಗೆ ತಾರತಮ್ಯ ತೋರುತ್ತಿದ್ದರು ಎಂಬ ಕಾರಣಕ್ಕೆ ಆಧುನಿಕ ಭಾರತದಲ್ಲಿ ವಿರುದ್ಧ ಶೋಷಣೆಗೆ ಒಳಪಟ್ಟಿದ್ದೇವೆ. ಈಗಿನ ಕಾಲಘಟ್ಟದಲ್ಲಿ ಬ್ರಾಹ್ಮಣರು, ಭಗವದ್ಗೀತೆ, ವೇದಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಸಂಸ್ಕೃತಿ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಉಪಪಂಗಡಗಳನ್ನು ಒಳಗೊಂಡಿರುವ ಬ್ರಾಹ್ಮಣ ಸಮುದಾಯ ಆ ಎಲ್ಲ ಉಪಪಂಗಡಗಳ ಹೊರತಾಗಿಯೂ ಏಕತೆ ಹಾಗೂ ಐಕ್ಯತೆಯನ್ನು ಸಾಧಿಸಬೇಕು. ಸಣ್ಣಪುಟ್ಟ ವ್ಯತ್ಯಾಸಗಳು ಇರುವುದನ್ನು ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಸಮುದಾಯ ಉದ್ಧಾರ ಮತ್ತು ಅಭಿವೃದ್ಧಿ ಸಾಧ್ಯ. ಈ ಎಲ್ಲ ಆತಂಗಳನ್ನು ಎದುರಿಸಲು ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗಲು ತ್ರಿಮತಸ್ಥರೆಂಬ ಬೇಧ ಮರೆತು ಒಟ್ಟಾಗಿ ಸಂಘಟಿತರಾಗಿರುವ ಅನಿವಾರ್ಯತೆ ಈ ಕಾಲದ ಅಗತ್ಯವಾಗಿದೆ.
ಬ್ರಾಹ್ಮಣರು. ಕಾಂ
What's new in the latest 1.0
ข้อมูล Brahmanaru (ಬ್ರಾಹ್ಮಣರು) APK
Brahmanaru (ಬ್ರಾಹ್ಮಣರು) รุ่นเก่า
Brahmanaru (ಬ್ರಾಹ್ಮಣರು) 1.0
การดาวน์โหลดที่รวดเร็วและปลอดภัยเป็นพิเศษผ่านแอป APKPure
คลิกเพียงครั้งเดียวเพื่อติดตั้งไฟล์ XAPK/APK บน Android!