Über Kristadani ಕ್ರಿಸ್ತದನಿ
Eine Sammlung religiöser Beobachtungen katholischer Christen
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಹಿತೈಷಿಗಳ ಪ್ರಯತ್ನದಿಂದ ‘ಕ್ರಿಸ್ತದನಿ’ ಎಂಬ ಅಪ್ಲಿಕೇಶನ್ ಹೊರಬಂದಿದೆ. ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. ಈ ಕ್ರಿಸ್ತದನಿ ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ದಿವ್ಯಬಲಿಪೂಜೆ, ಕ್ರೈಸ್ತ ಸಂತರ ಪರಿಚಯ, ಬೈಬಲಿನಲ್ಲಿ ಕಂಡು ಬರುವ ವ್ಯಕ್ತಿಗಳ ಚಿತ್ರಣ ಹೀಗೆ ಎಲ್ಲವೂ ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂದೇ ಈ ನಮ್ಮ ಹೊಸ ಪ್ರಯತ್ನದ ಆಶಯ.
ಈ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಇದನ್ನು ಪರಿಷ್ಕರಿಸಿ ಉತ್ತಮವಾಗಿಸುವ ಯತ್ನದಲ್ಲಿ ನಿಮ್ಮ ಅನಿಸಿಕೆಗಳು, ಸಲಹೆಗಳೂ ನಮಗೆ ಉತ್ತೇಜನಕಾರಿ. ನಿಮ್ಮ ಅಭಿಪ್ರಾಯಗಳನ್ನು ನಮಗೆ ಮುಕ್ತವಾಗಿ ತಿಳಿಸಿ ಕ್ರಿಸ್ತದನಿಯ ಉತ್ತಮಿಕೆಯಲ್ಲಿ ನೆರವಾಗಿರಿ. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ನದ ಫಲವಿದು. ಈ ಪ್ರಯತ್ನ ಫಲಪ್ರದವಾಗಲೆಂದು ಹಾರೈಸುತ್ತೇವೆ.
What's new in the latest 14.0
Kristadani ಕ್ರಿಸ್ತದನಿ APK -Informationen
Alte Versionen von Kristadani ಕ್ರಿಸ್ತದನಿ
Kristadani ಕ್ರಿಸ್ತದನಿ 14.0

Superschnelles und sicheres Herunterladen über die APKPure-App
Ein Klick zur Installation von XAPK/APK-Dateien auf Android!