KJSC - ಸುತ್ತೂರು
4.1 and up
Android OS
Acerca del KJSC - ಸುತ್ತೂರು
34a Conferencia Estatal de Karnataka Asociación de Periodistas de Trabajo - Sri Soothuram Mysore
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ 34 ನೇ ವಾರ್ಷಿಕ ಸಮ್ಮೇಳನವನ್ನು ಆಚರಿಸಿಕೊಳ್ಳುತ್ತಿದೆ. ಮೂಲತಃ ಕಾರ್ಮಿಕ ಕಾಯ್ದೆಯಡಿ ನೋಂದಾಯಿತವಾದ ಕಾರ್ಯನಿರತ ಪತ್ರಕರ್ತರ ಸಂಘವು ಬದಲಾಗುತ್ತಿರುವ ಕಾಲಕ್ಕ ತಕ್ಕಂತೆ ತನ್ನ ಸಂಘಟನಾ ಸ್ವರೂಪವನ್ನು ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಮುನ್ನಡೆಸಿಕೊಂಡು ಬರುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ರಾಜ್ಯ ಸಮ್ಮೇಳನವನ್ನು ಮಾಡುವ ಮೂಲಕ ಸಂಘವು 80 ವರ್ಷಗಳಿಗೂ ಹೆಚ್ಚಿನ ಕಾಲ ತನ್ನ ಸಂಘಟನಾ ಕ್ರೀಯಾಶೀಲತೆಯನ್ನು ಕಾಯ್ದುಕೊಂಡು ಬಂದಿರುವುದು ಒಂದು ಸಾಧನೆಯೇ ಸರಿ.
ಕಾರ್ಯನಿರತ ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಜೊತೆ ಜೊತೆಗೆ ವೃತ್ತಿಪರ ವಾಗಿ ಪತ್ರಕರ್ತರ ಜ್ಞಾನ ಮಟ್ಟನವನ್ನು ಕಾಲ ಕಾಲಕ್ಕೆ ಉನ್ನತೀಕರಣಗೊಳಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಂಘವು ಯಶಸ್ವಿಯತ್ತ ಸಾಗಿದೆ. ಪ್ರತಿವರ್ಷ ಆಯೋಜಿಸುವ ಕಾರ್ಯನಿರತ ಪತ್ರಕರ್ತರ ಸಮ್ಮೇಳನವು ಇಂತಹ ರಚನಾತ್ಮಕ ಕೆಲಸ ಗಳ ದೊಡ್ಡ ಸಾಧ್ಯತೆಗಳನ್ನು ಹಿಗ್ಗಿಸುತ್ತಾ ಮುಂದುವೆರೆದಿವೆ. ರಾಜ್ಯದ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ಕೇಂದ್ರದ ಸಚಿವರುಗಳು ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಪತ್ರಕರ್ತರ ಹಕ್ಕೋತ್ತಾಯ ಗಳಿಗೆ ಸ್ಪಂದಿಸಿರುವುದು ದಾಖಲಾರ್ಹ. ಶಿವಮೊಗ್ಗ. ಕೊಪ್ಪಳ, ಮಂಡ್ಯ, ಹಾಸನ, ಬಾಗಲಕೋಟೆ, ಮಡಿಕೇರಿ. ಶ್ರವಣಬೆಳಗೊಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಡೆದ ರಾಜ್ಯ ಸಮ್ಮೇಳನಗಳು ಅರ್ಥಪೂರ್ಣವಾಗಿ ನೆನಪಿನಲ್ಲಿ ಉಳಿಯುವಂತಿವೆ. ಇವುಗಳು ಸಂಘದ ಸಂಘಟನಾತ್ಮಕ ಶಕ್ತಿಯನ್ನು ಹೆಚ್ಚಿಸಿವೆ.
ಸಮ್ಮೇಳನ ಸ್ವರೂಪ ಕಾಲ ಕಾಲಕ್ಕೆ ಬದಲಾಗುತ್ತಾ ವೃತ್ತಿಪರತೆಯನ್ನು ಇನ್ನಷ್ಟು ಸದೃಢಗೊಳಿಸುವ, ಸಮಾಜಮುಖಿಯಾಗಿ ರೂಪಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಮಾಧ್ಯಮ ಕ್ಷೇತ್ರದ ಕ್ಷಿಪ್ರ ಬದಲಾವಣೆಯ ಪರ್ವದಲ್ಲಿಂದು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಬಹುದಾದಂತ ವಿಚಾರ ಸಂಕಿರಣ, ಮಾಧ್ಯಮ ಕ್ಷೇತ್ರದ ಸಮಕಾಲೀನ ಸವಾಲುಗಳು ಮತ್ತು ಸಮಸ್ಯೆಗಳಿಗೆ ಕಂಡುಕೊಳ್ಳಬಹುದಾದ ದಾರಿಗಳ ಬಗ್ಗೆ ಹಿರಿಯ ಪತ್ರಕರ್ತರು, ಮಾಧ್ಯಮ ತಜ್ಞರಿಂದ ಉಪನ್ಯಾಸ, ಸಂವಾದಗಳು ಸಮ್ಮೇಳನದ ಮುಖ್ಯ ಉದ್ದೇಶವನ್ನು ಸಾದರಪಡಿಸುತ್ತವೆ. ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ದರ್ಶಕ ಮಾಧ್ಯಮವಾಗಿರುವ ಸುದ್ದಿ ಮಾಧ್ಯಮಗಳು ಮತ್ತು ಅವುಗಳಲ್ಲಿ ದುಡಿಯುತ್ತಿರುವ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳಿಗೆ ಸಮ್ಮೇಳನಗಳಲ್ಲಿ ನಿರ್ಧಿಷ್ಠ ಪರಿಹಾರ ಕಂಡುಕೊಳ್ಳುವ ಅವಕಾಶವೂ ಇದಾಗಿದೆ ಎನ್ನಬಹುದು. ಒಂದು ಸಂಘಟನೆಗೆ ಸಮ್ಮೇಳನಗಳು ಅಗತ್ಯವೂ ಮತ್ತು ಅರ್ಥಪೂರ್ಣವೂ ಆದಾಗ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
*********
ನಾಡಿನ ಹಿರಿಯ ಪತ್ರಕರ್ತರಲ್ಲೊಬ್ಬರಾದ ಶ್ರೀಯುತ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಮುನ್ನಡೆದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 34 ನೇ ರಾಜ್ಯ ಸಮ್ಮೇಳನವು ಈ ಬಾರಿ ಸಾಂಸ್ಕøತಿಕ ರಾಜಧಾನಿ ಮೈಸೂರಿನ ಸುತ್ತೂರು ಮಠದಲ್ಲಿ ನಡೆಯುತ್ತಿದೆ. (ಮಾ.1 ಮತ್ತು 2) ಸಮ್ಮೇಳನವನ್ನು ಅದರ ಆಶಯಕ್ಕೆ ತಕ್ಕಂತೆ ನಿರ್ವಹಿಸಲು ಹಿರಿಯ ಪತ್ರಕರ್ತರಾದ ಸಿ.ಕೆ ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿರುವ ಮೈಸೂರು ಪತ್ರಕರ್ತರ ಸಂಘವು ಬದ್ದತೆಯಿಂದ ಕೆಲಸ ಮಾಡುತ್ತಿದೆ. ಮೈಸೂರು ಪತ್ರಕರ್ತರ ಸಂಘವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ವೃತ್ತಪರತೆಯನ್ನು ಮೌಲ್ಯಧಾರಿತವಾಗಿ ಕಾಯ್ದುಕೊಂಡು ಬಂದಿರುವುದು ಶ್ಲಾಘನೀಯ ಸಂಗತಿ.
ಪತ್ರಕರ್ತರ ಸಂಘಟನೆಗೆ ಹಿರಿಯ ಪತ್ರಕರ್ತರಾದ ದಿವಂಗತ ರಾಜಶೇಖರಕೋಟಿ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಮಾಧ್ಯಮ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗಾಗಿ ವೃತ್ತಿನಿಷ್ಠೆಯಿಂದ ಪತ್ರಕರ್ತರ ಸಂಘಟನೆಗೆ ಭದ್ರ ಬುನಾದಿ ಹಾಕಿದ ನಿಕಟಪೂರ್ವ ಅಧ್ಯಕ್ಷರುಗಳಾದ ಅಂಶಿ ಪ್ರಸನ್ನಕುಮಾರ್, ಶಿವಕುಮಾರ್ ಮತ್ತಿತರರ ಕೊಡುಗೆ ಸದಾ ಶ್ಲಾಘನೀಯ. ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನೋತ್ಸವ ಆಚರಣೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಹುಟ್ಟು, ಬೆಳವಣಿಗೆಗೆ ಕಾರಣಕರ್ತರಲ್ಲಿ ಪ್ರಮುಖರೂ ಆಗಿರುವ ಹಿರಿಯ ಶತಾಯುಷಿಗಳಾದ ಹೆಚ್.ಎಸ್. ದೊರೆಸ್ವಾಮಿ, ಪಾಟೀಲ್ ಪುಟ್ಟಪ್ಪ ಅವರನ್ನು ಗೌರವಿಸುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣ ಗೊಳಿಸಲಾಗುತ್ತಿದೆ. ಇದೊಂದು ಐತಿಹಾಸಿಕ ಸಮ್ಮೇಳನವಾಗಿಯೂ ದಾಖಲಾಗುತ್ತಿದೆ.
Novedades más recientes 1.0
Información de KJSC - ಸುತ್ತೂರು APK
Descarga rápida y segura a través de APKPure App
¡Un clic para instalar archivos XAPK/APK en Android!