ಸದ್ಗುರು ಸಿದ್ಧಾರೂಢ ಲೀಲಕಥೆಗಳು 정보
Sadguru Siddhartha의 많은 lilahas 모음
ಭಾರತದ ನಾನಾ ಮೂಲೆಗಳಿಂದ ಕೋಟಿ ಕೋಟಿ ಭಕ್ತ ಸಮುದಾಯದ ಹೃನ್ಮನಗಳನ್ನು ಆಕರ್ಷಿಸಿದ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಮಠದಲ್ಲಿ ಅನ್ನದಾಸೋಹ, ತ್ರಿಕಾಲದಲ್ಲಿಯೂ ಶಾಸ್ತ್ರ, ಪ್ರವಚನ, "ಓಂ ನಮಃ ಶಿವಾಯ " ಮಹಾಮಂತ್ರದ ಭಜನೆ, ಜ್ಞಾನ ದಾಸೋಹ ಇತ್ಯಾದಿ ನಡೆಯುತ್ತಿದ್ದವು. ರಾಜ ರಂಕ, ಜಾತಿ, ಮತ, ಪಂಥ ಉಚ್ಚ - ನೀಚ ವರ್ಗ ಭೇದರಹಿತ ಮಾನವ ಮಾತ್ರರಿಗೆಲ್ಲ ಉದ್ದಾರ ಮಾಡಲು ಅವತರಿಸಿದ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ದರ್ಶನಕ್ಕೆ ಪ್ರತಿನಿತ್ಯ ಅನೇಕ ಮಹಾತ್ಮರು, ಲಕ್ಷಾವಧಿ ದರ್ಶನಾರ್ಥಿಗಳು ಆಗಮಿಸುತ್ತಿದ್ದರು.
ಕೃತಯುಗ, ತ್ರೇತಾಯುಗ, ದ್ವಾಪರ ಯುಗಗಳಲ್ಲಿ ಗಡ್ಡೆ-ಗೆಣಸು ತಿಂದು ಅನೇಕ ವರ್ಷಗಳ ಪರ್ಯಂತರ ಗುಡ್ಡ-ಗವಿಗಳಲ್ಲಿ ತಪಸ್ಸು ಮಾಡುವುದರಿಂದ ಪರಿಶ್ರಮದಾಯಕ, ವೆಚ್ಚದಾಯಕ ಯಜ್ಞ ಯಾಗಾದಿಗಳಿಂದ ಪರಮಾತ್ಮನ ಪ್ರಾಪ್ತಿಗಾಗಿ ಮಾನವನು ಬಹುಪರಿಶ್ರಮ ಪಡಬೇಕಾಗುತ್ತಿತ್ತು. ಆದರೆ ಕಲಿಯುಗದಲ್ಲಿ ಅಲ್ಪಾಯುಷಿಗಳಾದ ಮಾನವನು ನಿತ್ಯವೂ ಜೀವನೋಪಾಯಕ್ಕಾಗಿ ಹೋರಾಡುವಲ್ಲಿ ತಪಸ್ಸನ್ನಾಚರಿಸುವದೂ ಯಜ್ಞ-ಯಾಗಾದಿ ಮಾಡುವದೂ ಅಸಂಭವನೀಯವಾಗಿದೆ. ಈ ಕಲಿಯುಗದಲ್ಲಿ ಅತಿ ಸುಲಭ ಸಾಧನೆಯ ಪರಿಕಲ್ಪನೆ ಮಹಾತ್ಮರು ತಂದು ಕೊಟ್ಟಿದ್ದಾರೆ. ಮಾನವನು ತಾನು ಮಾಡುತ್ತಿರುವ ಕಾರ್ಯದಲ್ಲಿ ಊಟ ಮಾಡುವಾಗ, ಮಲಗುವಾಗ, ಯಾವುದೇ ಕಾರ್ಯದಲ್ಲಿದ್ದಾಗ ಪರಮಾತ್ಮನ ನಾಮಸ್ಮರಣೆ ಭಕ್ತಿಪೂರ್ವಕ ಮಾಡಿದಲ್ಲಿ ಜ್ಞಾನದ ಸೋಪಾನವನೇರಿ ಮುಕ್ತಿ ಪಡೆಯಲು ಅರ್ಹತೆ ಪಡೆಯುತ್ತಾನೆ. ಇಂತ ಮಹಾನ್ ಪುರುಷನ ಚರಿತ್ರೆಯನ್ನು ಕಥೆ ರೂಪದಲ್ಲಿ ಮಾಡಲಾಗಿದೆ,
ಕೃಪೆ :-ಸಿದ್ಧಾರೂಢ ಕಲ್ಪದ್ರುಮ ಚರಿತ್ರೆ ಹಾಗೂ ಶಿವದಾಸರ ಸದ್ಗುರು ಸಿದ್ಧಾರೂಢ ಚರಿತ್ರೆ ಯಿಂದ ಕಥೆಗಳನ್ನು ಆಯಿದುಕೊಂಡು e-book ಆಗಿ ಮಾಡಲಾಗಿದೆ ಭಕ್ತರು ಇದರ ಉಪಯೋಗ ತೆಗೆದುಕೊಳ್ಳಿ,