”Amaresh Karadi Koppal

Amaresh Karadi Koppal

  • 4.0.3 and up

    Android OS

เกี่ยวกับ Amaresh Karadi Koppal

ಅಮರೇಶ ಕರಡಿಜನ ಮೆಚ್ಚಿದ ಯುವ ನಾಯಕಇದು ಡಿಜಿಟಲ್ ಇಂಡಿಯಾ ಕಾಲ. ಹೊಸ ಭಾರತ ಉದಯವಾಗುತ್ತಿರುವ..

ಅಮರೇಶ ಕರಡಿ

ಜನ ಮೆಚ್ಚಿದ ಯುವ ನಾಯಕ

‘ಇದು ಡಿಜಿಟಲ್ ಇಂಡಿಯಾ ಕಾಲ. ಹೊಸ ಭಾರತ ಉದಯವಾಗುತ್ತಿರುವ ಮಹತ್ವದ ಹಂತ ಇದು. ಇಂತಹ ಸಂದರ್ಭದಲ್ಲಿ, ಯುವಜನತೆಯ ಮಿಡಿತ ಬಲ್ಲವನಾದ ನಾನು ಈ ಬೆಳವಣಿಗೆಯಿಂದ ದೂರ ಉಳಿಯುವುದು ಸಾಧ್ಯವಿದ್ದಿಲ್ಲ’ ಎನ್ನುವ ಅಮರೇಶ ಕರಡಿ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯ ಪ್ರಮುಖ ಯುವನಾಯಕರಾಗಿ ಹೊಮ್ಮಿದ್ದಾರೆ.

ರಾಜಕೀಯ ಕುಟುಂಬದಲ್ಲಿ ಹುಟ್ಟಿದ್ದರೂ, ಸಕ್ರಿಯ ರಾಜಕಾರಣದಿಂದ ಸದಾ ದೂರವಿದ್ದ ಅಮರೇಶ ತಮ್ಮ ಪಾಡಿಗೆ ತಾವು ಕೃಷಿ,

ಹೈನುಗಾರಿಕೆ, ತೋಟಗಾರಿಕೆ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಳ್ಳಿಯಲ್ಲೇ ಮನೆ ಮಾಡಿಕೊಂಡು, ಗ್ರಾಮೀಣ ಯುವಜನತೆಯೊಂದಿಗೆ ಬದುಕುತ್ತ, ಚುನಾವಣೆಗಳು ಬಂದಾಗ, ಗ್ರಾಮೀಣ ಪ್ರದೇಶದಲ್ಲಿ ತಂದೆ ಸಂಗಣ್ಣ ಕರಡಿ ಅವರ ಪರವಾಗಿ ಚುನಾವಣಾ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಇದ್ದವರು ಅವರು.

ಮೋದಿ ಅಲೆಯ ಮೋಡಿ

ಆದರೆ, ಮೋದಿ ಅಲೆ ಅವರನ್ನು ಸಕ್ರಿಯ ರಾಜಕೀಯಕ್ಕೆ ಕರೆದುಕೊಂಡು ಬಂದಿದೆ. ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್, ಆರ್ಥಿಕ ಪ್ರಗತಿಯ ಅಪಾರ ಸಾಧ್ಯತೆಗಳು, ಕೃಷಿಯಲ್ಲಿ ಮೂಡಿಬರುತ್ತಿರುವ ಹೊಸ ಕಸುವು, ವಿಸ್ತರಿಸುತ್ತಿರುವ ನೀರಾವರಿ ಪ್ರದೇಶ, ಹೆಚ್ಚುತ್ತಿರುವ ರೈಲು-ರಸ್ತೆ ಸಂಪರ್ಕ, ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವ ಉನ್ನತ ಶಿಕ್ಷಣ- ಹೀಗೆ ಪ್ರಗತಿಯ ನಾನಾ ಮುಖಗಳು ದೊಡ್ಡ ಪ್ರಮಾಣದಲ್ಲಿ ಅನಾವರಣಗೊಳ್ಳುತ್ತಿರುವುದನ್ನು ನೋಡಿದ ಅವರು, ಇವೆಲ್ಲ ಬೆಳವಣಿಗೆಗಳು ಎಲ್ಲರಿಗೂ ತಲುಪಬೇಕೆಂದರೆ, ರಾಜಕೀಯ ಪ್ರಾತಿನಿಧ್ಯ ಅನಿವಾರ್ಯ ಎಂಬುದನ್ನು ಕಂಡುಕೊಂಡರು.

ಹುದ್ದೆಗೆ ಆಸೆಪಡದ ನಾಯಕ

ಅಲ್ಲಿಂದೀಚೆಗೆ ಅವರು ಸಕ್ರಿಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ. ತಂದೆ ಸಂಗಣ್ಣ ಕರಡಿ ಅವರು ಶಾಸಕರಾಗಿ, ಸಂಸದರಾಗಿ ಸಕ್ರಿಯರಾಗಿದ್ದರೂ, ತಾವು ಮಾತ್ರ ಅದರಿಂದ ದೂರವಿದ್ದ ಅಮರೇಶ ಕರಡಿ, ಈಗ ತಂದೆಯ ಹೆಜ್ಜೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಗ್ರಾಮೀಣ ಜನರ ನಾಡಿಮಿಡಿತ ಬಲ್ಲ ಅವರಿಗೆ ಯುವಜನತೆಯ ನಾಡಿ ಮಿಡಿತವೂ ಗೊತ್ತು. ಹಳೆಯ ಬೇರಿಗೆ ಹೊಸ ಚಿಗುರು ಸೇರಿಸುವ ಮಹತ್ವದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಕೊಪ್ಪಳ ಜಿಲ್ಲೆಯ ಭರವಸೆಯ ಯುವನಾಯಕನಾಗಿ ಅವರು ಹೊಮ್ಮಿದ್ದಾರೆ.

ಹಿರಿಯರ ಒತ್ತಾಯಕ್ಕೆ ಮಣಿದು ಒಮ್ಮೆ ಜಿಲ್ಲಾ ಪಂಚಾಯತ್‍ಗೆ ಸ್ಪರ್ಧಿಸಿದ್ದು, ಒಮ್ಮೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಅದು ಬಿಟ್ಟರೆ, ಪಕ್ಷದಲ್ಲಿ ಮಹತ್ವದ ಸ್ಥಾನಕ್ಕಾಗಿ ಅವರೆಂದಿಗೂ ಆಸೆ ಪಡಲಿಲ್ಲ. ಆದರೆ, ಪಕ್ಷ ಬಲಪಡಿಸುವ ಕೆಲಸವನ್ನು ಮಾತ್ರ ನಿರಂತರವಾಗಿ ಮಾಡುತ್ತಿದ್ದಾರೆ. ಸಂಘಟನೆ ಬಲಗೊಂಡರೆ ಮಾತ್ರ ಸಕ್ರಿಯ ರಾಜಕಾರಣದಲ್ಲಿ ಗೆಲುವು ಸಾಧ್ಯ ಎಂದು ಅರಿತಿರುವ ಅಮರೇಶ ಕರಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಜನೆಗಳನ್ನು ಹಳ್ಳಿಹಳ್ಳಿಗಳಿಗೂ ತಲುಪಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತ ಹೊರಟಿದ್ದಾರೆ.

ಮಾದರಿ ಭಾರತದ ಕನಸು

’ಕೇಂದ್ರ ಸರ್ಕಾರದ ಯೋಜನೆಗಳು ಅದೆಷ್ಟು ಪರಿಣಾಮಕಾರಿಯಾಗಿವೆ ಎಂದರೆ, ಅವುಗಳ ಕುರಿತು ಸರಿಯಾಗಿ ಜಾಗೃತಿ ಮೂಡಿಸಿದರೆ, ಅದ್ಭುತ ಪ್ರಗತಿ ಸಾಧಿಸಬಹುದು’ ಎನ್ನುವ ಅಮರೇಶ ಕರಡಿ, ಈ ಕುರಿತು ಅಭಿಯಾನವನ್ನೇ ಕೈಗೊಂಡಿದ್ದಾರೆ. ಪಕ್ಷ ಸಂಘಟನೆ ಎಂದರೆ ಕೇವಲ ವೇದಿಕೆ ಕಾರ್ಯಕ್ರಮ ಎನ್ನುವ ಮನಃಸ್ಥಿತಿಯಿಂದ ದೂರ ಉಳಿದಿರುವ ಅವರು, ಜನರ ನಡುವೆ

ಬೆರೆಯುವ ಮೂಲಕ ಪಕ್ಷದ ಬೇರುಗಳನ್ನು ಬಲಪಡಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಬಿಜೆಪಿ ವಿಸ್ತಾರಕರ ಕಾರ್ಯಕ್ರಮವನ್ನು ಹಳ್ಳಿಹಳ್ಳಿಗಳಿಗೂ, ನಗರದ ಗಲ್ಲಿಗಲ್ಲಿಗಳಿಗೂ ವಿಸ್ತರಿಸಿದ್ದು ಅವರ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ಸಂಘಟನಾ ಚಾತುರ್ಯ

ಪಕ್ಷದಲ್ಲಿ ಯಾವುದೇ ಸ್ಥಾನ ಹೊಂದಿರದಿದ್ದರೂ ಅಮರೇಶ ಕರಡಿ ಕೊಪ್ಪಳ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನರ ನಡುವೆ ಮಹತ್ವದ ಸ್ಥಾನ ಪಡೆದಿದ್ದಾರೆ. ಪಕ್ಷದ ಸಂಘಟನೆಯ ಪರೋಕ್ಷ ಹೊಣೆ ಹೊತ್ತಿರುವ ಅವರು, ಎಲ್ಲರನ್ನೂ ಸೇರಿಸಿಕೊಂಡು, ಭಿನ್ನಾಭಿಪ್ರಾಯಗಳನ್ನು ಶಮನ ಮಾಡುತ್ತ, ಪಕ್ಷ ಬಲಪಡಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ತಂದೆ ಸಂಗಣ್ಣ ಕರಡಿಯವರ ಚುನಾವಣಾ ಪ್ರಚಾರವನ್ನು ಅವರು ನಿಭಾಯಿಸುತ್ತಿದ್ದ ರೀತಿಯನ್ನು ಕಂಡವರು, ಅಮರೇಶ ಕರಡಿ ಅವರ ಸಂಘಟನಾ

ಚಾತುರ್ಯ ಕಂಡು ಬೆರಗಾಗಿದ್ದಾರೆ.

ಬರಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆಂದು ಹಲವಾರು ಹಿರಿ-ಕಿರಿ ನಾಯಕರು ತಮ್ಮ ಉದ್ದುದ್ದ ವ್ಯಕ್ತಿಚಿತ್ರವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ, ಅಮರೇಶ ಕರಡಿ ಅವರು ಅದ್ಯಾವುದರ ಗೊಡವೆಗೂ ಹೋಗಿಲ್ಲ. ಯಾವ್ಯಾವ ಅಂಶಗಳು ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸಲಿವೆ? ಜನರ ಮನಸ್ಸಿನಲ್ಲಿ ಏನಿದೆ? ರಾಜಕೀಯ ಪಕ್ಷಗಳಿಂದ ಜನ ಏನನ್ನು

ನಿರೀಕ್ಷಿಸುತ್ತಿದ್ದಾರೆ? ಮಾಡಿರುವ ಸಾಧನೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? ತಂತ್ರಜ್ಞಾನವನ್ನು ಸರಳವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ? ಎಂಬ ವಿಷಯಗಳತ್ತ ಅವರು ಗಮನ ಹರಿಸಿದ್ದಾರೆ.

ಮರಳು ಮಾತುಗಳಿಗಿಂತ, ಮಾಡಿರುವ ಸಾಧನೆಗಳಷ್ಟೇ ಜನರ ಮನಸ್ಸು ತಟ್ಟಲು ಸಾಧ್ಯ ಎಂಬುದನ್ನು ಅರಿತಿರುವ ಅಮರೇಶ ಕರಡಿ ಅವರು, ಸುದೀರ್ಘ ಅವಧಿಯಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಂದೆ ಸಂಗಣ್ಣ ಕರಡಿ ಹಾಗೂ ನವಭಾರತ ಪರಿಕಲ್ಪನೆಯನ್ನು

ಸಾಕಾರಗೊಳಿಸುತ್ತಿರುವ ಬಿಜೆಪಿಯ ಸಾಧನೆಗಳನ್ನು ಜನರ ಮುಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ.

ಹೀಗಾಗಿ, ಕ್ಷೇತ್ರದ ನಾನಾ ಧರ್ಮ, ಜಾತಿ, ವರ್ಗ ಹಾಗೂ ಪ್ರಾದೇಶಿಕ ಭಿನ್ನತೆಯುಳ್ಳ ಜನ ಅಮರೇಶ ಕರಡಿಯಲ್ಲಿ ಒಬ್ಬ ಉದಯೋನ್ಮುಖ ನಾಯಕನನ್ನು ಗುರುತಿಸಿದ್ದಾರೆ. ಮನ್ನಣೆಯ ದಾಹವಿಲ್ಲದ, ಸ್ಥಾನಕ್ಕಾಗಿ ಹಂಬಲಿಸದ, ಸದಾ ತಮ್ಮೊಂದಿಗೆ ಬೆರೆಯುವ ಹಾಗೂ ತಮ್ಮ ಕಷ್ಟಗಳಿಗೆ ಸ್ಪಂದಿಸುವ ನಿಜವಾದ ಜನಪ್ರತಿನಿಧಿಯನ್ನು ಅವರಲ್ಲಿ ಕಂಡುಕೊಂಡಿದ್ದಾರೆ.

แสดงเพิ่มเติม

What's new in the latest 1.0

Last updated on Oct 9, 2017
Minor bug fixes and improvements. Install or update to the newest version to check it out!
แสดงเพิ่มเติม

วิดีโอและภาพหน้าจอ

  • Amaresh Karadi Koppal เทรลเลอร์เป็นทางการสำหรับแอนดรอยด์
  • Amaresh Karadi Koppal ภาพหน้าจอ 1
  • Amaresh Karadi Koppal ภาพหน้าจอ 2
  • Amaresh Karadi Koppal ภาพหน้าจอ 3
  • Amaresh Karadi Koppal ภาพหน้าจอ 4
  • Amaresh Karadi Koppal ภาพหน้าจอ 5
APKPure ไอคอน

การดาวน์โหลดที่รวดเร็วและปลอดภัยเป็นพิเศษผ่านแอป APKPure

คลิกเพียงครั้งเดียวเพื่อติดตั้งไฟล์ XAPK/APK บน Android!

ดาวน์โหลด APKPure
thank icon
เราใช้คุกกี้และเทคโนโลยีอื่น ๆ บนเว็บไซต์นี้ เพื่อปรับปรุงประสบการณ์การใช้งานของคุณ
การคลิกลิงก์ใด ๆ ในหน้านี้แสดงว่าคุณยินยอมในส่วนของ นโยบายความเป็นส่วนตัว และ นโยบายคุกกี้ ของเรา
เรียนรู้เพิ่มเติม