Bengalgram作物
ಪುರಾತನಕಾಲದಿಂದಲೂ ಮಾನವನ ಆಹಾರ ಪೌಷ್ಠಿಕತೆಯಲ್ಲಿ ದ್ವಿದಳ ಧಾನ್ಯಗಳು ಮಹತ್ವದ ಸ್ಥಾನವನ್ನು ವಹಿಸಿವೆ. ದ್ವಿದಳ ಧಾನ್ಯದ ಪ್ರಮುಖ ಬೆಳೆಯಾದ ಕಡಲೆ ಬಹು ಉಪಯೋಗಿ ಬೆಳೆ. ಕಡಲೆ ಕಾಳುಗಳನ್ನು ಕುದುಸಿ ತರಕಾರಿಯನ್ನಾಗಿ ಬಳಸುತ್ತಾರೆ. ಇವಲ್ಲದೇ ಕಡಲೆ ಬೆಳೆಯ ಎಲೆಗಳನ್ನು ತರಕಾರಿಯನ್ನಾಗಿ ಉಪಯೋಗಿಸುತ್ತಾರೆ. ಕಾಳುಗಳನ್ನು ಬೇಳೆ ಮಾಡಿ ವಿವಿಧ ಆಹಾರ ಪದಾರ್ಥಗಳನ್ನಾಗಿ ಬಳಸಲಾಗುತ್ತದೆ. ಕಡಲೆ ಕಾಳು ಹಾಗೂ ಹೊಟ್ಟನ್ನು ಪಶುಗಳಿಗೆ ಆಹಾರವನ್ನಾಗಿ ಬಳಸಲಾಗುತ್ತದೆ. ಕಡಲೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಸಸಾರಜನಕವಿರುವದರಿಂದ ಮನುಷ್ಯನ ಹಾಗೂ ಪ್ರಾಣಿಗಳ ಅಂಗಾಗಳನ್ನು ಶಕ್ತಿಯುತಗೊಳಿಸುತ್ತದೆ. ಬಹುಷ್ಯ ಕಡಲೆಯ ಈ ಗುಣಧರ್ಮದಿಂದಲೇ ಭಾರತದಲ್ಲಿ ಶಾಖಾಹಾರಿಗಳ ಸಂಖ್ಯೆ ಹೆಚ್ಚಿರುವುದು ಇತಿಹಾಸದಿಂದ ಕಂಡು ಬರುತ್ತದೆ.