Dharmo保护
ಲಕ್ಷಾಂತರ ವರ್ಷಗಳ ಹಿಂದೂ ಕ್ಷಾತ್ರ ಪರಂಪರೆ, ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಪುರಾಣಗಳು, ಹಿಂದೂ ಕ್ಷಾತ್ರ ಸಾಧಕರು, ಭಾರತೀಯರ ಸಾಧನೆ, ವಿಶ್ವಕ್ಕೆ ಹಿಂದೂಗಳ ಕೊಡುಗೆ. ನಮ್ಮ ಜ್ಞಾನದ ಶ್ರೇಷ್ಟತೆ, ಇವೆಲ್ಲವೂ ಸಾವಿರ ವರುಷಗಳ ಮುಸ್ಲಿಮರ, ಕ್ರಿಶ್ಚಿಯನ್ನರ, ಕಮ್ಯುನಿಷ್ಟರ, ಹಾಗೂ ಜಾತ್ಯಾತೀತರ, ರಾಜಕೀಯ ಹಾಗೂ ಸಾಂಸ್ಕೃತಿಕ ಆಕ್ರಮಣಗಳಿಂದ ಮರೆಮಾಚಲಾಗಿದ್ದು ಹಿಂದುಗಳನ್ನು ನಿರಭಿಮಾನಿಗಳನ್ನಾಗಿಸಿದೆ. ಹಿಂದುಗಳಿಗೆ ತಮ್ಮ ಸಂಸ್ಕೃತಿಯನ್ನು ಅರಿತು, ಹೆಮ್ಮೆ ಪಡಲು ಹಾಗೂ ಹಿಂದೂ ಸಾಧಕರ ಬದುಕು ತಮ್ಮ ಜೀವನಕ್ಕೆ ಸ್ಪೂರ್ತಿಯಾಗಲಿ ಎನ್ನುವ ಉದ್ದೇಶದಿಂದ ಸ್ವಾಭಿಮಾನೀ ಹಿಂದೂ ಸಮಾಜವನ್ನು ನಿರ್ಮಿಸುವುದು ಹಿಂದೂ ಧರ್ಮ ಪರಿಷತ್ತಿನ ಉದ್ದೇಶವಾಗಿದೆ. ಇದರ ಕಾರ್ಯರೂಪಕ್ಕಾಗಿಯೇ ಈ ಜಾಲತಾಣ ಸಿದ್ಧಪಡಿಸಲಾಗಿದೆ. ಹಿಂದುಗಳೆಲ್ಲರೂ ಜಾತಿ ಭೇದ ಮರೆತು. ಧಾರ್ಮಿಕ ಗೊಂದಲ ಕಳೆದು ಸ್ವಾಭಿಮಾನದಿಂದ ಸಂಘಟಿತರಾಗಿ ಹಿಂದೂ ದೇಶವನ್ನು ವಿಶ್ವಗುರುವಾಗಿಸಲೆಂಬುದೇ ನಮ್ಮ ಅಪೇಕ್ಷೆಯಾಗಿದೆ. ಹಿಂದೂಗಳು ಹೆಮ್ಮೆ ಪಡಬಹುದಾದ ರಾಷ್ಟ್ರಹಿತದ ಎಲ್ಲಾ ವಿಚಾರಗಳಿಗೂ ಹಿಂದೂ ಧರ್ಮಪರಿಷತ್ ಜಾಲತಾಣ ಜ್ಞಾನದ ವೇದಿಕೆಯಾಗಿದೆ. ನೋಡಿದ ಕೇಳಿದ ಓದಿದ ವಿಚಾರಗಳನ್ನು ಸಾರಾಂಶರೂಪದಲ್ಲಿ ಇಲ್ಲಿ ಕೊಡಲಾಗಿದೆ. ಸಲಹೆಗಳಿಗೂ, ಸಹಕಾರಕ್ಕೂ, ಅವಕಾಶವಿದೆ. ದೋಷಗಳಿದ್ದಲ್ಲಿ ಸೂಚಿಸಿರಿ. ನೀವೂ ಓದಿರಿ ನಿಮ್ಮವರಿಗೂ ತಿಳಿಸಿರಿ. ಜೈ ಹಿಂದ್, ಜೈ ಭಾರತ ಮಾತೆ. ವಂದೇ ಮಾತರಂ.