このRGRHCL Indira Mane Ver -2.1について
助成金の受益者の自己開発したモバイルアプリケーションを取得するには
ರಾಜ್ಯ ಸರ್ಕಾರವು ವಿವಧ ವಸತಿ ಯೋಜನೆಗಳ ಅನುಷ್ಟಾನ ಮತ್ತು ಜಿ.ಪಿ.ಎಸ್ ಅಧಾರಿತ ಭೌತಿಕ ಪ್ರಗತಿಯನ್ನು ನಮೂದಿಸಲು ಹಾಗೂ ಪ್ರಗತಿಯಾಧಾರಿತ ಅನುದಾನವನ್ನು ಅತೀ ಶೀಘ್ರವಾಗಿ ಪಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಉದ್ದೇಶದಿಂದ ಕನಸಿನ ಮನೆ ಎಂಬ ಮೊಬೈಲ್ಅಪ್ಲಿಕೇಶನ್ ಸಾಪ್ಟ್ ವೇರ್ (Mobile Application Software)ನ್ನು ಅಭಿವೃದ್ದಿಪಡಿಸಲಾಗಿದೆ.
ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಿಂದ ಫಲಾನುಭವಿಗಳೇ ನೇರವಾಗಿ ತಮ್ಮ ಮೊಬೈಲ್ ಮೂಲಕ ತಮ್ಮ ಮನೆಯ ಹಂತವಾರು ಛಾಯಾಚಿತ್ರವನ್ನು ಜಿ.ಪಿ.ಎಸ್ ಗೆ ಅಳವಡಿಸಿ ನಿಗಮದ ಜಾಲತಾಣದಲ್ಲಿ ಇಂದೀಕರಿಸಬಹುದು.
ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನ ಅನುಕೂಲಗಳು:
• ಸ್ವತಃ ಫಲಾನುಭವಿಗಳೇ ತಮ್ಮ ಮನೆಯ 4 ಹಂತದ ಛಾಯಚಿತ್ರವನ್ನು ಹಂತ-ಹಂತವಾಗಿ ನಿರ್ಮಾಣವಾದ ತಕ್ಷಣವೇ ಜಿ.ಪಿ.ಎಸ್ ಮಾಡಿ ಸಲ್ಲಿಸಬಹುದು.
• ನಿಗಮ ಮತ್ತು ಫಲಾನುಭವಿಯ ನಡುವೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿದ್ದು,
• ಈ ಅಪ್ಲಿಕೇಶನ್ ಜನ ಸ್ನೇಹಿಯಾಗಿದ್ದು, ಪಲಾನುಭವಿಯು ಸ್ವಯಂ ಅನುದಾನ ಪಡೆಯಲು ಮತ್ತು ಮನೆ ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.
• ಮದ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಮನೆ ನಿರ್ಮಾಣದಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಿರುವುದಿಲ್ಲ.