Sirigannada 정보
Sirigannada
ಆತ್ಮೀಯ ಸ್ವಾಗತ,
ಯಾವುದೇ ನಾಡು-ನುಡಿ-ಪರಂಪರೆ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕೆಂದರೆ ಪ್ರಾಪಂಚಿಕ ಬೆಳವಣಿಗೆಗೆ ಮುಖಾಮುಖಿಯಾಗುವುದು ಅನಿವಾರ್ಯ. ನಮ್ಮ ಹೆಮ್ಮೆಯ ಕನ್ನಡ
ಪರಂಪರೆ ಕೂಡ ವಿವಿಧ ಕಾಲಘಟ್ಟಗಳಲ್ಲಿ ಇಂತಹ ಹತ್ತು ಹಲವು ಸಂಘರ್ಷಗಳಿಗೆ ಮುಖಾಮುಖಿಯಾಗಿ ತನ್ನ ಕಸವು ಉಳಿಸಿಕೊಂಡು ಬಂದಿದೆ. ಅದೇ ರೀತಿ ಇತ್ತೀಚಿನ ದಶಕಗಳಲ್ಲಿ ಪ್ರಾದೇಶಿಕ ಭಾಷೆಗಳು ತಮ್ಮ ಚಹರೆ ಉಳಿಸಿಕೊಳ್ಳಲು ತಂತ್ರಜ್ಞಾನದ ನಾಗಾಲೋಟದೊಂದಿಗೆ ಸೆಣೆಸಬೇಕಾಗಿದೆ. ಇದೀಗ ಕಂಪ್ಯೂಟರ್, ದೂರವಾಣಿ, ಮೊಬೈಲ್, ಅಂತರ್ಜಾಲವನ್ನು ಆಧರಿಸಿದ ಉದ್ದಿಮೆ-ಸೇವಾ ಕ್ಷೇತ್ರಗಳಲ್ಲಿ ಅಸಂಖ್ಯ ಆವಿಷ್ಕಾರಗಳು ಆಗುತ್ತಿವೆ. ಅದಕ್ಕೆ ಅನುಗುಣವಾಗಿ ಕನ್ನಡಧಾರೆ ಕೂಡ ಎಲ್ಲದರೊಂದಿಗೆ ಮಿಳಿತವಾಗಲು ಯತ್ನಿಸುತ್ತಾ ಮುಖ್ಯವಾಹಿನಿಯೊಂದಿಗೆ ಮುನ್ನಡೆಯುತ್ತಿದೆ.
ಇದೇ ದಿಸೆಯಲ್ಲಿ, ನಾವು ಈಗ 'ಸಿರಿಗನ್ನಡ' ಎಂಬ ಆಂಡ್ರಾಯ್ಡ್ ಮೊಬೈಲ್ ಆಪ್ ಸಿದ್ಧಪಡಿಸಿದ್ದೇವೆ. ಜಗತ್ತಿನೆಲ್ಲೆಡೆ ಇರುವ ಕನ್ನಡ ಸಾಹಿತ್ಯ-ಸಂಸ್ಕೃತಿ ಪ್ರಿಯರನ್ನು ಒಂದೇ ವೇದಿಕೆಯಡಿ ತರಲು ಇದು ನೆರವಾಗುತ್ತದೆ. ಸಾಹಿತ್ಯದ ಓದುಗರು, ಬರಹಗಾರರು, ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವರು, ಪ್ರವೃತ್ತಿಯಾಗಿಸಿಕೊಂಡವರು, ಬರಹಗಾರರಾಗಬೇಕೆಂಬ ಗುರಿ ಹೊಂದಿರುವವರು ಎಲ್ಲರೂ ಇದನ್ನು ಬಳಸಬಹುದು. ಸಂಘ-ಸಂಸ್ಥೆಗಳು, ಇಲಾಖೆಗಳು, ಪರಿಷತ್ತು, ಅಕಾಡೆಮಿಗಳು ತಾವು ಏರ್ಪಡಿಸುವ ಕಾರ್ಯಕ್ರಮಗಳ ವಿವರಗಳನ್ನು ಇದರಲ್ಲಿ ಲಗತ್ತಿಸುವ ಮೂಲಕ ಎಲ್ಲರನ್ನೂ ಕ್ಷಣಾರ್ಧದಲ್ಲಿ ತಲುಪಬಹುದು. ಅಷ್ಟೇ ಏಕೆ, ಕಾರ್ಯಕ್ರಮದ ನೇರ ಪ್ರಸಾರವನ್ನೂ ಮಾಡಬಹುದು.
ಇದರ ಓದುಗರು, ನೋಡುಗರು, ತಾವು ವೀಕ್ಷಿಸಿದ ಕನ್ನಡ ಸಿನಿಮಾ, ನಾಟಕ, ಓದಿದ ಪುಸ್ತಕ, ಕವನ, ಕಥೆ, ಕಾದಂಬರಿ, ಚುಟುಕ ಕುರಿತು ಇಲ್ಲಿ ಅನಿಸಿಕೆ, ಅಭಿಪ್ರಾಯ, ವಿಮರ್ಶೆ ಮಂಡಿಸಬಹುದು. ಜೊತೆಗೆ ಚಿತ್ರ, ವಿಡಿಯೋಗಳನ್ನು ಲಗತ್ತಿಸುವ ಸೌಕರ್ಯ ಇದರಲ್ಲಿದೆ. ಫೇಸ್ಬುಕ್, ವಾಟ್ಸಾಪ್ ನಂತಹ ಹಲವಾರು ಅಂತರ್ಜಾಲ ಸಾಧನಗಳೊಂದಿಗೆ ಇದು ಸಂಪರ್ಕ ಬೆಸೆಯುತ್ತದೆ.
ನಮ್ಮ ಶಾಸ್ತ್ರೀಯ ಸಂಗೀತ, ವಿಜ್ನ್ಯಾನ ಸಾಹಿತ್ಯ ಹಾಗೂ ಪುರಾಣ-ಪ್ರವಚನಗಳ ಆಸಕ್ತರು ಉಪಯೋಗಿಸಲು ಅನುಕೂಲವಾಗುವಂತೆಯೂ ಈ ಅಪ್ ನ್ನು ರೂಪಿಸಲಾಗಿದೆ. ನಮ್ಮ ಈ ಪ್ರಯತ್ನವನ್ನು ಕನ್ನಡ ಪ್ರಿಯರಾದ ತಾವೆಲ್ಲರೂ ಪ್ರೀತಿಯಿಂದ ಬರಮಾಡಿಕೊಂಡು ಹಾರೈಸುತ್ತೀರೆಂದು ನಂಬಿದ್ದೇವೆ. ಸಿರಿಗನ್ನಡ ನಾಡು-ನುಡಿ-ಪರಂಪರೆ ಕುರಿತ ಆರೋಗ್ಯಕರ ಸ್ಪಂದನ ಹಾಗೂ ಸಂವಾದಕ್ಕೆ ಇದು ಸಮರ್ಥ ವೇದಿಕೆಯಾಗುತ್ತದೆಂದು ಆಶಿಸಿದ್ದೇವೆ.
ಜಯ ಪ್ರಕಾಶ.ಏನ್
೩ನೇ ಕ್ರಾಸ್, ಆರ್ ಎಂ ಎಸ್ ಲೇಔಟ್
ಸಂಜಯ ನಗರ
ಬೆಂಗಳೂರು
web-www.sirigannada.in
What's new in the latest 1.5
We regularly release updates to the app, which include great new features, as well as improvements for speed and reliability.