關於ಈಶಾವಾಸ್ಯ ಉಪನಿಷತ್
這奧義知識的無知,教育,愚昧,投光的因果報應,靈魂
ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ.
ಭಗವದ್ಗೀತೆ ಇದರ ವಿಸ್ತಾರವೆಂಬ ಅಭಿಪ್ರಾಯವಿದೆ. ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.
ಸಂನ್ಯಾಸಿಗಳಾದವರು, ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ-ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.
ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ-ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು ನಂಬಲಾಗಿದೆ.
ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ ಯಾಗುವುದು.