ತ್ರೈತ ಸಿದ್ಧಾಂತ ಭಗವದ್ಗೀತೆ
18.1 MB
حجم الملف
Android 5.1+
Android OS
عن ತ್ರೈತ ಸಿದ್ಧಾಂತ ಭಗವದ್ಗೀತೆ
ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು
ಶಾಸ್ತ್ರಕ್ಕೆ ಪ್ರಮಾಣ ಗ್ರಂಥವಾದ ಭಗವದ್ಗೀತೆ ನೂರಕ್ಕೆ ನೂರು ಪಾಲು ಶಾಸ್ತ್ರಬದ್ಧವಾದ ಸಿದ್ಧಾಂತದಿಂದ ಕೂಡಿಕೊಂಡಿದೆ. ಪರಮಾತ್ಮ ಸ್ವತಃವಾಗಿ ತಿಳಿಸಿದ ಭಗವದ್ಗೀತೆ ಪ್ರಕಾರ ನೋಡಿದ ಪಕ್ಷದಲ್ಲಿ ಆತ್ಮ ، ಜೀವಾತ್ಮಗಳು ಎರಡು ಇಲ್ಲವೆಂದು ಪರಮಾತ್ಮ ಒಂದೇ ಇರುವುದೆಂದು ಅದ್ವೈತವು ، ಜೀವಾತ್ಮ ، ಪರಮಾತ್ಮಗಳು ಎರಡು ಇವೆಯೆಂದು ದೈತ ، ಇವು ಎರಡು ಗೀತೆಗೆ ಸ್ವಲ್ಪ ಪಕ್ಕದ ಮಾರ್ಗದಲ್ಲಿ ಇವೆ ಎಂದು ತಿಳಿಯುತ್ತದೆ. ಅಂದರೆ ಇವು ಪೂರ್ತಿ ಸರಿಯಾದ ಸಿದ್ಧಾಂತಗಳು ಅಲ್ಲವೆಂದು ಅರ್ಥವಾಗುತ್ತಿದೆ. ಗೀತೆಯನ್ನು ಪ್ರಮಾಣವಾಗಿಟ್ಟುಕೊಂಡು ನೋಡುವುದಾದರೆ ಮಾನವಮಾತ್ರವಾದ ಗುರುಗಳು ಹೇಳಿದ ದ್ವೈತ ، ಅದ್ವೈತ ಸಿದ್ಧಾಂತಗಳು ಎರಡು ಹೇತುಬದ್ಧವಾಗಿಲ್ಲ.
ದ್ವೈತ ಸಿದ್ಧಾಂತವನ್ನು ಪರಿಶೀಲಿಸಿ ನೋಡುವುದಾದರೆ ಭೂಮಿ ಮೇಲೆ ಬೇರುಗಳು ಇಲ್ಲದಂತೆ ಗಿಡವಿದೆ ಎಂಬುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿರುವುದೆಂದು ತಿಳಿಯುತ್ತಿದೆ.
ಹಾಗೆಯೇ ಅದ್ವೈತ ಸಿದ್ಧಾಂತವನ್ನು ಪರಿಶೀಲಿಸಿದರೆ ಭೂಮಿ ، ಬೇರುಗಳು ಎರಡು ಇಲ್ಲದಂತೆ ಗಿಡ ಇದೆಯೆಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗುತ್ತದೆ.
ಅಂದರೆ ಎರಡು ಸಿದ್ಧಾಂತಗಳು ಅಶಾಸ್ತ್ರೀಯವಾಗಿವೆ ಎಂದು ، ಬದ್ಧವಾಗಿಲ್ಲವೆಂದು ತಿಳಿಯುತ್ತಿದೆ. ಈ ಎರಡು ಸಿದ್ಧಾಂತಗಳು ಅಶಾಸ್ತ್ರಿಯಗಳು، ಅಹೇತುಕ ಎನ್ನುವುದಕ್ಕೆ ಗೀತೆಯಲ್ಲಿನ ಪುರುಷೋತ್ತಮ ಪ್ರಾಪ್ತಿ ಯೋಗದಲ್ಲಿರುವ 16،17 ಶ್ಲೋಕಗಳೆ ಆಧಾರ. ಈ ಎರಡು ಶ್ಲೋಕಗಳು ದ್ವೈತ ، ಅದ್ವೈತ ಸಿದ್ಧಾಂತಗಳೆರಡನ್ನು ಒಂದೇ ಏಟಿನಲ್ಲಿ ಹೊಡೆದು ಬಿಸಾಕುತ್ತವೆ. ಈ ಎರಡು ಶ್ಲೋಕಗಳೆ ಅಸಲಾದ (ಸತ್ಯವಾದ) ಆಧ್ಯಾತ್ಮಿಕ ಸಿದ್ಧಾಂತವಾದ ತ್ರೈತಸಿದ್ಧಾಂತವನ್ನು ಬೋಧಿಸುತ್ತಿವೆ. ಎರಡು ಶ್ಲೋಕಗಳು ಅಲ್ಲದೆ ಗೀತೆ ಒಂದರ ಸಾರಾಂಶ ಎಲ್ಲವೂ ತ್ರೈತದ ಮೇಲೆಯೇ ಬೋಧಿಸಲ್ಪಟ್ಟಿದ್ದಾರೆ.
ಕಲಿಯುಗದಲ್ಲಿ ದ್ವೈತ ، ಅದ್ವೈತ ಸಿದ್ಧಾಂತಗಳು ಹೊರಗಡೆ ಬಂದರೆ ، ದ್ವಾಪರಯುಗ ಅಂತ್ಯದಲ್ಲಿಯೇ ತ್ರೈತ ಸಿದ್ಧಾಂತವು ಭಗವಂತನ ಕೈಯಿಂದ ಬೋಧಿಸಲ್ಪಟ್ಟಿದೆ. ಆದರೂ ಸಹ ಮಾಯೆ ಪ್ರಭಾವದಿಂದ ತ್ರೈತವು ಅರ್ಥವಾಗದೆ ಹೋಗಿದೆ. ಮಾಯೆ ಪ್ರಭಾವದಿಂದಲೇ ದ್ವೈತ ، ಅದ್ವೈತಗಳು ಹೊರಬಿದ್ದಿವೆ.
ಈಗಲೂ ದ್ವೈತ ، ಅದ್ವೈತ ಗುರುಪರಂಪರೆಯಾದ ಮಧ್ವಾಚಾರ್ಯ ، ಶಂಕರಾಚಾರ್ಯರ ಪೀಠಗಳು ಭೂಮಿ ಮೇಲೆ ಇವೆ. ತ್ರೈತವೆಂಬ ಹೆಸರಾಗಲಿ ، ಅದನ್ನು ಬೋಧಿಸುವವರಾಗಲಿ ಇಲ್ಲದಂತೆ ಹೋಗಿದ್ದಾರೆ.
ಪರಿಸ್ಥಿತಿಯಲ್ಲಿ ಶ್ರೀಶ್ರೀಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರಿಂದ ತ್ರೈತ ಸಿದ್ಧಾಂತವು ಹೊರಗಡೆ ಬಂದಿರುವುದು ನಮ್ಮ ಅದೃಷ್ಟವೆಂದು ತಿಳಿಯಬೇಕು. ತ್ರೈತದ ಪ್ರಕಾರವೇ ಭಗವದ್ಗೀತೆ ، ಭಗವದ್ಗೀತೆ ಪ್ರಕಾರವೇ ತ್ರೈತವು ಇರುವುದು.
ಕೈಯಲ್ಲಿನ ಮೂರು ರೇಖೆಗಳು ، ಈಶ್ವರ ಲಿಂಗದ ಮೇಲಿನ ಮೂರು ರೇಖೆಗಳು ، ತ್ರೈತ ಸಿದ್ಧಾಂತವಾದ ಜೀವಾತ್ಮ ، ಆತ್ಮ ، ಪರಮಾತ್ಮಗಳ ಬಗ್ಗೆಯೇ ತಿಳಿಸುತ್ತಿವೆ.
ಶ್ರೀ ಕೃಷ್ಣನ ನಿಜ ಭಾವ ತಿಳಿದುಕೊಳ್ಳುವುದಕ್ಕೆ ಆ ಗೀತೆಯನ್ನು ತ್ರೈತ ಸಿದ್ಧಾಂತ ರೂಪವಾಗಿ ಓದಬೇಕು.
ಈ ತ್ರೈತ ಸಿದ್ಧಾಂತ ಭಗವದ್ಗೀತೆಯನ್ನು ಓದಿದವರು ನಿಜವಾದ ಗೀತಾ ಜ್ಞಾನವನ್ನು ತಿಳಿದು ، ಮೋಕ್ಷ ಕಾಮಿಗಳಾಗಬಹುದು.
What's new in the latest 0.0.5
معلومات ತ್ರೈತ ಸಿದ್ಧಾಂತ ಭಗವದ್ಗೀತೆ APK
الإصدارات القديمة لـ ತ್ರೈತ ಸಿದ್ಧಾಂತ ಭಗವದ್ಗೀತೆ
ತ್ರೈತ ಸಿದ್ಧಾಂತ ಭಗವದ್ಗೀತೆ 0.0.5
ತ್ರೈತ ಸಿದ್ಧಾಂತ ಭಗವದ್ಗೀತೆ 0.0.3
قم بتنزيل سريع وآمن بالغاية عبر تطبيق APKPure
قم بتثبيت ملفات XAPK/APK بنقرة واحدة على أندرويد!